ಕವಿತಾ ಚಹಾಲ್ (8 ಏಪ್ರಿಲ್ 1985 ರಂದು ಜನನ) 5 "9" ಎತ್ತರದ ಹೆವಿವೇಯ್ಟ್ ಭಾರತೀಯ ಮಹಿಳಾ ಬಾಕ್ಸರ್ ಮತ್ತು 2012 ರಿಂದ 2014 ರವರೆಗಿನ ೨ಅತ್ಯುನ್ನತ ವಿಶ್ವ ಶ್ರೇಯಾಂಕವನ್ನು ಪಡೆದವರು (2016 ರಲ್ಲಿ ಎಐಬಿಎ ರ್ಯಾಂಕಿಂಗ್ ) ನಿಮಿರಿಯ ಎಂಬ ಹಳ್ಳಿ ಭಿವಾನಿ ಜಿಲ್ಲೆ, ಹರಿಯಾಣದವರು. ಅವರ ಸಾಧನೆಗಳ ಗುರುತಿಸುವಿಕೆಗಾಗಿ, ಭಾರತ ಸರ್ಕಾರವು 2013 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಇವರಿಗೆ ನೀಡಿದೆ. ಚಹಾಲ್ ಅವರು ಅರ್ಜುನ ಪ್ರಶಸ್ತಿಯನ್ನು ಪಡೆದ ಹರಿಯಾಣದ ಮೊದಲ ಮಹಿಳಾ ಬಾಕ್ಸರ್ ಆಗಿದ್ದಾರೆ. ವಿಶ್ವ ಚಾಂಪಿಯನ್ ಕ್ರೀಡಾಕೂಟದಲ್ಲಿ 2 ಬಾರಿ ಚಿನ್ನದ ಪದಕ ವಿಜೇತೆ, 2017 ರಲ್ಲಿ ಲಾಸ್ ಎಂಜಲೀಸ್ ಮತ್ತು 2013 ಉತ್ತರ ಐರ್ಲೆಂಡ್ನಲ್ಲಿ 4 ಬಾರಿ ಟೈಮ್ ಏಷ್ಯನ್ ಚಾಂಪಿಯನ್ಶಿಪ್, ಏಷ್ಯಾದ ಕಪ್ ಪದಕ ವಿಜೇತೆ, 8 ಚಿನ್ನದ ಪದಕಗಳೊಂದಿಗೆ ಮಹಿಳಾ ರಾಷ್ಟ್ರೀಯ ಚಾಂಪಿಯನ್ಷಿಪ್ ಬಾಕ್ಸಿಂಗ್ನಲ್ಲಿ ಇವರ ದಾಖಲೆ ಸೇರ್ಪಡೆಯಗಿದೆ. ಫೆಡರೇಷನ್ ಕಪ್ ನಲ್ಲಿ 5 ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ ಮತ್ತು 2012 ರ ಎಲ್ಲಾ ಇಂಡಿಯಾ ಪೋಲಿಸ್ ಗೇಮ್ಸ್ನಲ್ಲಿ 6 ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಇಂಟರ್-ಜೋನಲ್ ಸೂಪರ್ ಕಪ್ ಚಾಂಪಿಯನ್ಷಿಪ್ನಲ್ಲಿ ಚಾಹಲ್ 3 ಬಾರಿ ಚಿನ್ನದ ಪದಕ ವಿಜೇತರಾಗಿದ್ದಾರೆ. === ಬಾಲ್ಯ === ನಿಮರಿಯ ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ (ಭಾರತ) 8 ಏಪ್ರಿಲ್ 1985 ರಂದು ಕವಿತಾ ಚಹಲ್ ರವರು ಭುಪ್ ಸಿಂಗ್ ಮತ್ತು ರಮೇಶ್ ದೇವಿಯವರಿಗೆ ಜನಿಸಿದರು. ಭಿವಾನಿ ರಾಷ್ಟ್ರೀಯ ಬಾಕ್ಸಿಂಗ್ನಲ್ಲಿ ಪ್ರಸಿದ್ಧ ಪ್ರದೇಶವಾಗಿದೆ ಮತ್ತು ಅನುಭವವನ್ನು ಹೊಂದಿದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ಗೆ ಹೆಸರುವಾಸಿಯಾಗಿದೆ. ಬಾಕ್ಸಿಂಗ್ನಲ್ಲಿ ಚಹರ್ ರ ಆರಂಭಿಕ ತರಬೇತಿಯನ್ನು ಅವರ ತಂದೆ ಭುಪ್ ಸಿಂಗ್ ರವರೆ ನಿರ್ವಹಿಸುತ್ತಿದ್ದರು. ಚಹರ್ ಬಾಕ್ಸಿಂಗ್ನಲ್ಲಿ ಪ್ರಗತಿ ಹೊಂದಿದ ನಂತರ, ಜಗದೀಶ್ ಸಿಂಗ್ ಅವರ ಅಡಿಯಲ್ಲಿ ಭಿವಾನಿ ಬಾಕ್ಸಿಂಗ್ ಕ್ಲಬ್ ನಲ್ಲಿ ತರಬೇತಿಯನ್ನು ಪಡೆದರು, ಅವರು ಭಾರತೀಯ ಏಸ್ ಪುರುಷ ಬಾಕ್ಸಿಂಗ್ ತರಬೇತಿಯನ್ನು ಕೂಡಾ ನಿರ್ವಹಿಸುತ್ತಾರೆ. ತನ್ನ ರಾಜ್ಯ ಮತ್ತು ಭಾರತಕ್ಕಾಗಿ ಪದಕಗಳನ್ನು ಮತ್ತು ಪ್ರಶಸ್ತಿಗಳನ್ನು ಗೆದ್ದ ನಂತರ, 2013 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಅರ್ಪಿಸಲು ಹರಿಯಾಣ ರಾಜ್ಯದ ಮೊದಲ ಮಹಿಳಾ ಬಾಕ್ಸರ್ ಆಗಿ ಹೊರಹೊಮ್ಮಿದರು. === ಅಂತರಾಷ್ಟ್ರೀಯ ಸಾಧನೆಗಳು === === ರಾಷ್ಟ್ರೀಯ ಮಟ್ಟದ ಸಾಧನೆಗಳು === === ರಾಷ್ಟ್ರೀಯ ಮಟ್ಟದ ದಾಖಲೆಗಳು === === ಪ್ರಶಸ್ತಿಗಳು ಮತ್ತು ಮನ್ನಣೆಗಳು === 2013 ರಲ್ಲಿ ಅರ್ಜುನ ಪ್ರಶಸ್ತಿ 2014 ರಲ್ಲಿ ಭೀಮ ಪ್ರಶಸ್ತಿ === ಉಲ್ಲೇಖಗಳು === ಇಂಡಿಯನ್ ಬಾಕ್ಸಿಂಗ್ ಫೆಡರೇಶನ್ ಬಾಕ್ಸರ್ ವಿವರಗಳು. "ಸೋಧಿ ಖೇಲ್ ರತ್ನ ಪ್ರಶಸ್ತಿ; 14 ಇತರರಿಗೆ ಅರ್ಜುನ ಪ್ರಶಸ್ತಿ" === ಬಾಹ್ಯ ಕೊಂಡಿಗಳು === ಹರಿಯಾಣ ಬಾಕ್ಸಿಂಗ್ ವಿವರ ಕವಿತಾ ಚಾಹಲ್- ಯಶಸ್ಸಿನ ಕಥೆ 2017-09-23 ವೇಬ್ಯಾಕ್ ಮೆಷಿನ್ ನಲ್ಲಿ.